Select Page

Date: April 25, 2023

Location: https://kabct.org/event/inauguration-of-renovated-laboratory/

ದಿನಾಂಕ 25.04.2023 ಬೆಳಿಗ್ಗೆ 9:30 ಗಂಟೆಗೆ ಕಮಲ್ ಎ ಬಾಳಿಗಾ ಮೆಡಿಕಲ್ ಸೆಂಟರ್ ಹಾರಾಡಿ ಸಾಲಿಕೇರಿ ಇಲ್ಲಿ ನವೀಕೃತ ರಕ್ತ ಮತ್ತು ಮೂತ್ರ ಪರೀಕ್ಷಾ ಕೇಂದ್ರದ ಉದ್ಘಾಟನೆಯನ್ನು ಡಾ. ಹರಿಶ್ಚಂದ್ರ,ಆಡಳಿತ ನಿರ್ದೇಶಕರು ಗಾಂಧಿ ಆಸ್ಪತ್ರೆ ಉಡುಪಿ ಇವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ ವಿ ಬಾಳಿಗಾ ಚಾರಿಟೀಸ್ ಮತ್ತು ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿನ ಇದರ ವಿಶ್ವಸ್ಥರುಗಳಾದ ಡಾ. ರಾಜಾರಾಮ್ ವಿ ಬಾಳಿಗಾರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಪಿ.ವಿ ಭಂಡಾರಿ ನಿರ್ದೇಶಕರು ಡಾ. ಎ .ವಿ ಬಾಳಿಗಾ ಸಮೂಹ ಸಂಸ್ಥೆಗಳು  ಮತ್ತು ಮುಖ್ಯ ಲೆಕ್ಕಾಧಿಕಾರಿ ಶ್ರೀ ಕರುಣಾಕರ್ ಶೆಟ್ಟಿ ಇವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತ ಅಧಿಕಾರಿಣಿ ಯಾದ ಶ್ರೀಮತಿ ಸೌಜನ್ ಶೆಟ್ಟಿ ಇವರು ಸ್ವಾಗತಿಸಿದರು. ಅಭಯ ಪುನರ್ವಸತಿ ಕೇಂದ್ರದ ಪ್ರಬಂಧಕರಾದ ಶ್ರೀನಾಗರಾಜ ಕೆ ಪಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಯುತ ವಿವೇಕ್ ಪಾಟೀಲ್ ಇವರು ವಂದಿಸಿದರು.
    ಇಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷಾ ಕೇಂದ್ರದಲ್ಲಿ ಅತೀ ಉಪಯುಕ್ತ ಹೊಸ ಉಪಕರಣಗಳನ್ನು ಅಳವಡಿಸಿಕೊಳ್ಳಲಾಗಿದ್ದು ಈ ಉಪಕರಣಗಳ ಪ್ರಾಯೋಜಕತ್ವವನ್ನು M/S L3 Harris India ಬೆಂಗಳೂರು ಎಂಬ ಕಂಪೆನಿಯಿಂದ ಮಾಡಿರುತ್ತಾರೆ. ಕಮಲ್ ಎ ಬಾಳಿಗಾ ಮೆಡಿಕಲ್ ಸೆಂಟರ್ ನಲ್ಲಿ ಸುತ್ತಮುತ್ತಲಿನ ಹಳ್ಳಿಯ  ಬಡ ರೋಗಿಗಳಿಗೆ ಉಚಿತ ಹಾಗೂ ಕಡಿಮೆ ಬೆಲೆಯ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿದ್ದು ಮುಂದಿನ ದಿನಗಳಲ್ಲಿ ಬಡ ರೋಗಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷಾ ಸೌಲಭ್ಯವು  ದೊರೆಯಲಿರುವುದು