Select Page

Date: May 23, 2023

ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಅಂಗ ಸಂಸ್ಥೆಯಾದ ಅಭಯ ಪುನರ್ವಸತಿ ಕೇಂದ್ರದಲ್ಲಿ ಮಾಸಿಕ ಕೌಟಂಬಿಕ ಸಭೆ 23/5/2023 ರಂದು ನಡೆಯಿತು.
ಡಾ.ಏನ್.ಆರ್ ಆಚಾರ್ಯ ಸ್ಮಾರಕ ಆಸ್ಪತ್ರೆ ಕೋಟೇಶ್ವರ ಇಲ್ಲಿನ ಮನೋವೈದ್ಯರಾದಂತಹ ಡಾ.ಮಹಿಮಾ ಆಚಾರ್ಯ ಇವರು ಮಾಹಿತಿ ಪತ್ರ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕರಾದ  ಡಾ. ಪಿ. ವಿ ಭಂಡಾರಿಯವರು ವಹಿಸಿದ್ದರು, ಮನೋವೈದ್ಯರಾದ            ಡಾ. ಮಾನಸ್ ಇ.ಆರ್,ಡಾ. ಪವನ್ ಜೈನ್ , ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಣಿ ಸೌಜನ್ಯ ಶೆಟ್ಟಿ, ಬಾಳಿಗಾ ಆಸ್ಪತ್ರೆಯ ಮುಖ್ಯ ಹಣಕಾಸು ಅಧಿಕಾರಿಯಾದಂತಹ ಕರುಣಾಕರ್ ಬಿ.ಶೆಟ್ಟಿ , ಅಭಯ ಪುನರ್ವಸತಿ ಕೇಂದ್ರದ ಪ್ರಬಂಧಕರಾದ ನಾಗರಾಜ್ ಟಿ.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಮುಗಿದ ನಂತರ ಅತಿಥಿ ಗಣ್ಯರು ಸಸಿಗಳನ್ನು ನೆಟ್ಟು ಕಾರ್ಯಕ್ರಮವನ್ನು ಕೊನೆಗೊಳಿಸಿದರು. ಕಾರ್ಯಕ್ರಮದಲ್ಲಿ ಅಭಯ ಪುನರ್ವಸತಿ ಕೇಂದ್ರದ ನಿವಾಸಿಗರ ಮನೆಯವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ,ಸ್ವಾಗತ,ಧನ್ಯವಾದ ಹಾಗೂ ಪ್ರಾಥನೆಯನ್ನು ಅಭಯ ಪುನರ್ವಸತಿ ಕೇಂದ್ರದ ನಿವಾಸಿಗರು ನಡೆಸಿಕೊಟ್ಟರು.