ದಿನಾಂಕ 26/6/2024ರಂದು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ರೋಟರಿ ಉಡುಪಿ ಮತ್ತು
ವಿದ್ಯಾರತ್ನ ನರ್ಸಿಂಗ್ ಕಾಲೇಜ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರಾಷ್ಟ್ರೀಯ ದಿನದ ಅಂಗವಾಗಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಈ ವರ್ಷದ ಧ್ಯೇಯ ವಾಕ್ಯ The evidence is clear :invest in prevention ಈ ಮಾಹಿತಿ ಕಾರ್ಯಗಾರವನ್ನು ರೋಟರಿಯನ್ PHF ದೀಪ ಭಂಡಾರಿ ಅಧ್ಯಕ್ಷರು ರೋಟರಿ ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು,ಮುಖ್ಯ ಅತಿಥಿಗಳಾಗಿ ರೋಟರಿಯನ್ PHF ಶುಭ ಬಾಶ್ರೀ ಕಾರ್ಯದರ್ಶಿ ರೋಟರಿ ಉಡುಪಿ ಮತ್ತು ಶ್ರೀಮತಿ ಶ್ರೀಲತಾ ಉಪನ್ಯಾಸಕರು ವಿದ್ಯಾರತ್ನ ನರ್ಸಿಂಗ್ ಕಾಲೇಜು ಇವರು ಆಗಮಿಸಿದ್ದರು. ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ. ವಿ. ಭಂಡಾರಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು
ವೇದಿಕೆಯಲ್ಲಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ದೀಪಕ್ ಮಲ್ಯ ಡಾ. ಮಾನಸ್ ಈ. ಆರ್. ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಶ್ರೀ ಸ್ರವಣ್ ವಿದ್ಯಾರ್ಥಿ ಎಂ ವಿ ಶೆಟ್ಟಿ ಕಾಲೇಜ್ ಮಂಗಳೂರು ಇವರು ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಕುಮಾರಿ ಫ್ಲಾವಿಯ ವಿದ್ಯಾರ್ಥಿನಿ ಕ್ರಿಸ್ತು ಜಯಂತಿ ಬೆಂಗಳೂರು ಇವರು ಸ್ವಾಗತಿಸಿದರು. ಸೈಂಟ್ ಆಗ್ನೆಸ್ ಪಿ ಜಿ ಕಾಲೇಜ್ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯಾರಾದ ಕುಮಾರಿ ನಿಸರ್ಗ ಇವರು ವಂದಿಸಿದರು. ಹಾಗೂ ಕುಮಾರಿ ರಚನ ರೂತ್ ಡಿ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಅದರ ಅಪಾಯದ ಕುರಿತಾಗಿ ಮೂಕಾಭಿನಯ ಮತ್ತು ಪ್ರಹಸನ ಪ್ರದರ್ಶಿಸಿದರು.
ನಂತರ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ಪಿ .ವಿ ಭಂಡಾರಿ ಇವರು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಮಾತನಾಡಿದರು ಮತ್ತು ಡಾ. ದೀಪಕ್ ಮಲ್ಯ ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಗೆಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು.
120ಕ್ಕೂ ಹೆಚ್ಚಿನ ನರ್ಸಿಂಗ್ ವಿದ್ಯಾರ್ಥಿಗಳು ಮನಶಾಸ್ತ್ರಜ್ಞ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು