Select Page

Date: July 25, 2023

ರೋಟರಿ ಬ್ರಹ್ಮಾವರ ಗೋಲ್ಡನ್ ಜುಬಿಲಿ ಡಯಾಲಿಸಿಸ್ ಸೆಂಟರಿನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್‌ ಬ್ರಹ್ಮಾವರ ಜಂಟಿಯಾಗಿ ಆಯೋಜಿಸುತ್ತಿರುವ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಹಾರಾಡಿಯ ಕಮಲ್ ಎ. ಬಾಳಿಗಾ ಮೇಡಿಕಲ್ ಸೆಂಟರ್‌ನಲ್ಲಿ ಆಯೋಜಿಸಲಾಯಿತು.
ಗ್ರಾಮೀಣ ಸಮುದಾಯವರು ಸಮಾಜಮುಖಿ ಚಿಂತನೆಗಳ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು, ಎಂದು  ಮೂಳೆ ಶಸ್ತ್ರ ಚಿಕಿತ್ಸಕರಾದ ಡಾ.ಅಕ್ಷಯ್ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಳಿಗ ಸಂಸ್ಥೆ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿ ಇವರು ಅಧ್ಯಕ್ಷತೆ ವಹಿಸಿ ಡಯಾಲಿಸಿಸ್ ಒಂದು ವರುಷ ಪೂರೈಸಿದ ಮಜಲುಗಳು ತಿಳಿಸುತ್ತ  ಸಹಕಾರಕ್ಕೆ ಕೈ ಜೋಡಿಸಿದ ಸರ್ವರನ್ನು ನೆನಪಿಸಿಕೊಂಡರು.
ಮುಖ್ಯ ಅತಿಥಿಯಾಗಿ   ಮೂತ್ರಪಿಂಡ ತಜ್ಞರಾದ ಡಾ.ಮೇಘಾ ಪೈ ಹಾಗೂ  ಬಾಳಿಗ ಸಂಸ್ಥೆಯ ಕಣ್ಣಿನ ಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ.ಲಾವಣ್ಯ ಜಿ.ರಾವ್.  ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರು ಶ್ರೀ ಉದಯ್ ಕುಮಾರ್ ಶೆಟ್ಟಿ. ಉಡುಪಿಯ ವೈದ್ಯಾಧಿಕಾರಿ ಡಾ.ಪ್ರೀತಿ ಕಾಮತ್  ಕಮಲ್.ಎ.ಬಾಳಿಗ ವೈದ್ಯಕೀಯ ಕೇಂದ್ರ ಹಾರಾಡಿಯ ವೈದ್ಯಾಧಿಕಾರಿ  ಡಾ.ಪವನ್ ಕುಮಾರ್ ರೆಡ್ಡಿ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ‌ ಸಂಧರ್ಭದಲ್ಲಿ ಡಾ.ಮೇಘ ಪೈ ಇವರು,ಡಾಯಲೈಸರ್ ಮತ್ತು ಟ್ಯೂಬಿಂಗ್ಸ್ ಗಳನ್ನು ಬಾಳಿಗ ಸಮೂಹ ಸಂಸ್ಥೆಗೆ ಕೊಡುಗೆಯಾಗಿ ನೀಡಿದರು.
ಬಾಳಿಗ ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಸ್ವಾಗತಿಸಿ, ನಾಗವೇಣಿ ಇವರು ಪ್ರಾರ್ಥಿಸಿದರು. ರೋಟರಿಯ ಮಾಜಿ ಅಧ್ಯಕ್ಷರಾದ ವಾಲ್ಟರ್ ಪಿಂಟೋ ಇವರು ವಂದಿಸಿ, ಅಭಯ ಸಂಸ್ಥೆಯ ಪ್ರಬಂಧಕರಾದ ಶ್ರೀ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.  ಆದಿತ್ಯವಾರ ಹೊರತುಪಡಿಸಿ  ದಿನಾಂಕ 25.7.2023 ರಿಂದ ಆರಂಭಗೊಂಡು‌ ದಿನಾಂಕ 5.8.2023 ರ ವರೆಗೆ ‌ಬೆಳ್ಳಿಗ್ಗೆ 10.ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಉಚಿತ ಆರೋಗ್ಯ  ತಪಾಸಣೆ ಕಣ್ಣಿನ ತಪಾಸಣೆ ಅಧಿಕ ರಕ್ತದ ಒತ್ತಡ, ರಕ್ತಹೀನತೆ   ಮಧುಮೇಹ ತಪಾಸಣೆ ಕೊಲೆಸ್ಟ್ರಾಲ್ ಹಾಗೂ ಕಿಡ್ನಿಯ ಆರೋಗ್ಯ ಸಂಬಂಧಿತ ರಕ್ತ ತಪಾಸಣೆಗಳು ಉಚಿತವಾಗಿ ನಡೆಯಲಿದೆ.