Select Page

Date: September 21, 2023

ದಿನಾಂಕ 21/9/2023 ಗುರುವಾರ ಬೆಳಿಗ್ಗೆ 10ಗಂಟೆ ಗೆ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮರೆಗುಳಿ (Alzheimer’s day)   ದಿನದ ಅಂಗವಾಗಿ “Creative Caregining for People Living With Dememtia : Building on the Strenght of Informal Caregivers” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಕಮಲ್ ಎ ಬಾಳಿಗ ಸ್ಮಾರಕ ಹಾಲ್ ನಲ್ಲಿ ನಡೆಯಿತು. ಈ ವರ್ಷದ ಧ್ಯೇಯ ವಾಕ್ಯ “Never too early Never too late”

ಡಾ ಆರ್ ವಿ ಬಾಳಿಗ, ಟ್ರಸ್ಟಿ, ಡಾ ಎ ವಿ ಬಾಳಿಗ ಸ್ಮಾರಕ ಚಾರಿಟೀಸ್ ಮತ್ತು ಕಮಲ್ ಎ ಬಾಳಿಗ ಚಾರಿಟೇಬಲ್  ಟ್ರಸ್ಟ್ ಮುಂಬೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ  ಡಾ ಎಲ್ಸ ಸನಟೊಂಬಿ ದೇವಿ, ಡೈರೆಕ್ಟರ್, ಮಾಹೆ ಫೈಮರ್ ಇನ್ಸ್ಟಿಟ್ಯೂಟ್ ಪ್ರೊಫೆಸರ್ ಆಂಡ್ ಕ್ಯೂಎಂಆರ್, ಎಂಸಿಓಎನ್ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ ಎ ವಿ ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ ಪಿ ವಿ ಭಂಡಾರಿ ಇವರು ವಹಿಸಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿಣಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಸ್ವಾಗತಿಸಿದರು. ಡಾ ಎ ವಿ ಬಾಳಿಗಾ ಆಸ್ಪತ್ರೆಯ ಪೇಶೆಂಟ್ ಕೇರ್ ಎಕ್ಸಿಕ್ಯೂಟಿವ್ ಶ್ರೀ ರಂಗನಾಥ ರಾವ್ ಇವರು ಪ್ರಾರ್ಥಿಸಿದರು.ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ನ ಪಿ ಹೆಚ್ ಡಿ ಸ್ಕಾಲರ್ ಆಗಿರುವ ಕ್ಲಾರಿಟ ಶೈನಲ್ ಮಾರ್ಟಿಸ್ ಇವರು ವಂದಿಸಿದರು,ಆಪ್ತಸಮಾಲೋಚಕಿ ಕುಮಾರಿ ಭಾಗ್ಯಶ್ರೀ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. Dementia ಕಾಯಿಲೆಯ ಬಗ್ಗೆ ಡಾ ಪಿ ವಿ ಭಂಡಾರಿ   ಇವರು ಮಾತಾಡಿದರು. Caregiver empowerment for home care ಎಂಬ ವಿಷಯದ ಬಗ್ಗೆ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ನ ಪಿ ಹೆಚ್ ಡಿ ಸ್ಕಾಲರ್ ಆಗಿರುವ ಶ್ರೀಮತಿ ಪ್ರತಿಭಾ ಲೀಡಿಯ ಬ್ರಾಗ್ಸ್,ಶ್ರೀಮತಿ ಕ್ಲಾರಿಟ ಶ್ಯೆನಲ್, ಶ್ರೀಮತಿ ಸೀಲಿಯ ಪೀಟರ್,ಶ್ರೀ ಶ್ರೀನಿಧಿ ಜೋಗಿ ಇವರು ಮಾತಾಡಿದರು.