ದಿನಾಂಕ 10-01-2024 ರ ಬುಧವಾರ ಬೆಳಿಗ್ಗೆ 10 ಗಂಟೆಗೆ, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಭಾರತೀಯ ವೈದ್ಯಕೀಯ ಸಂಘ, ಉಡುಪಿ- ಕರಾವಳಿ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಹತ್ತು ದಿನಗಳ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ವೈದ್ಯಕೀಯ ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ, ಸಬ್ ಇನ್ಸ್ಪೆಕ್ಟರ್, ಮಣಿಪಾಲ ಪೊಲೀಸ್ ಠಾಣೆ, ಡಾ. ಅರ್ಚನಾ ಭಕ್ತ, ಅರಿವಳಿಕೆ ತಜ್ಞರು ಹಾಗೂ ಕಾರ್ಯದರ್ಶಿಗಳು ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ, ಡಾ. ವಿನೋದ್ ಸಿ. ನಾಯಕ್, ಪ್ರಾಧ್ಯಾಪಕರು, ಫೊರೆನ್ಸಿಕ್ ವಿಭಾಗ, ಕೆಎಂಸಿ ಮಣಿಪಾಲ ಇವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಡಾ. ಮಾನಸ್ ಇ ಆರ್ ಮತ್ತು ಡಾಕ್ಟರ್ ದೀಪಕ್ ಮಲ್ಯ, ಮನೋವೈದ್ಯರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರೂ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಮದ್ಯ ವ್ಯಸನ ಶಿಬಿರದ ಕುರಿತು ಜನಸಾಮಾನ್ಯರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಬೀದಿ ನಾಟದ 14ನೇ ಪ್ರದರ್ಶನವನ್ನು ತೆಂಕನಡಿಯೂರು ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶ್ರೀಮತಿ ಪೂರ್ಣಿಮಾ ಅವರು ಪ್ರಾರ್ಥಿಸಿದರು. ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿ, ಡಾ. ಎ. ವಿ. ಬಾಳಿಗಾ ಆಸ್ಪತ್ರೆ, ಉಡುಪಿ ಇವರು ಸ್ವಾಗತಿಸಿದರು. ಶ್ರೀಮತಿ ಪದ್ಮಾ ರಾಘವೇಂದ್ರ, ಆಪ್ತ ಸಮಾಲೋಚಕರು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವರು ಹತ್ತು ದಿನಗಳ ಈ ವಸತಿ ಶಿಬಿರದಲ್ಲಿ ನಡೆದ ಕಾರ್ಯವಿಧಾನಗಳ ಸಂಕ್ಷಿಪ್ತ ವರದಿಯನ್ನು ನೀಡಿದರು.
ಶಿಬಿರಾರ್ಥಿಗಳಿಗಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಇಬ್ಬರು ಶಿಬಿರಾರ್ಥಿಗಳು ಮತ್ತು ಒಬ್ಬರು ಶಿಬಿರಾರ್ಥಿಯ ಮನೆಯವರು ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಘವೇಂದ್ರ, ಸಬ್ ಇನ್ಸ್ಪೆಕ್ಟರ್, ಮಣಿಪಾಲ ಠಾಣೆ ಡಾ. ಅರ್ಚನಾ ಭಕ್ತ, ಅರಿವಳಿಕೆ ತಜ್ಞರು ಹಾಗೂ ಕಾರ್ಯದರ್ಶಿ, ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ, ಡಾ. ವಿನೋದ್ ಸಿ. ನಾಯಕ್ ಪ್ರಾಧ್ಯಾಪಕರು, ಫೊರೆನ್ಸಿಕ್ ವಿಭಾಗ, ಕೆಎಂಸಿ ಮಣಿಪಾಲ ಇವರುಗಳು ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಶಿಬಿರದ ಸಮಯದಲ್ಲಿ ಸಹಾಯ ಹಸ್ತ ನೀಡಿದ ಕೆ. ಎಸ್ .ಹೆಗಡೆ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಪ್ರಿಯ ಮತ್ತು ಡಾ. ಮನಾಲಿ, ಸ್ವಯಂ ಸೇವಕರಾದಂತಹ ಶ್ರೀಮತಿ ಮಧುರ, ಶ್ರೀ ವಿಶ್ವೇಶ್ವರ್, ಶ್ರೀಮತಿ ವಿನುತ ಕಿರಣ್ ಮತ್ತು ಶ್ರೀಮತಿ ಹಾಗೂ ಶ್ರೀ ವಿಠಲ್ ದಾಸ್ ದಂಪತಿಗಳು ಇವರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಬೀದಿ ನಾಟಕವನ್ನು ಪ್ರದರ್ಶಿಸಿದ ತೆಂಕನಿಡಿಯೂರು ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಡಾ. ಪಿ. ವಿ. ಭಂಡಾರಿ, ಮನೋವೈದ್ಯರು ಮತ್ತು ವೈದ್ಯಕೀಯ ನಿರ್ದೇಶಕರು ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ಅಧ್ಯಕ್ಷೀಯ ಭಾಷಣವನ್ನು ನೀಡಿದರು. ಡಾ. ಮಾನಸ್ ಇ.ಆರ್., ಮನೋವೈದ್ಯರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರು ವಂದಿಸಿದರು. ಶ್ರೀಮತಿ ಪ್ರಮೀಳ ಡಿಸೋಜಾ, ನರ್ಸಿಂಗ್ ಮೇಲ್ವಿಚಾರಕಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.