ದಿನಾಂಕ 09-06-2024 ರ ಭಾನುವಾರದಂದು ನವಜೀವನ ಲೇ ಕೌನ್ಸೆಲರ್ ತರಬೇತಿ ಕಾರ್ಯಕ್ರಮದ 3ನೇ ಬ್ಯಾಚಿನ ಉದ್ಘಾಟನಾ ಸಮಾರಂಭ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಒನ್ ಗುಡ್ ಸ್ಟೆಪ್ ಇದರ ಜಂಟಿ ಆಶ್ರಯದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು.
ಈ ಮಾಹಿತಿ ಕಾರ್ಯಗಾರವನ್ನು ನಿವೃತ್ತ ಪ್ರಾಂಶುಪಾಲರು, ಪ್ರಾಧ್ಯಾಪಕರು, ಡಾ. ಟಿ. ಎಂ. ಎ ಪೈ ಕಾಲೇಜು ಉಡುಪಿಯ ಡಾ. ಮಹಾಬಲೇಶ್ವರ ರಾಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಅತಿಥಿಗಳಾಗಿ ಶ್ರೀಮತಿ ಅಮಿತ ಪೈ, ಸಂಸ್ಥಾಪಕರು ಒನ್ ಗುಡ್ ಸ್ಟೆಪ್ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ. ಆರ್. ಚಂದ್ರಶೇಖರ್ ಅವರ ಸಮಾಧಾನ ಆಪ್ತಸಮಾಲೋಚನಾ ಕೇಂದ್ರದಲ್ಲಿ ಲೇ ಕೌನ್ಸೆಲಿಂಗ್ ತರಬೇತಿ ಪಡೆದ ಆಪ್ತಸಮಾಲೋಚಕರಾದ ಶ್ರೀ ರಾಘವೇಂದ್ರ ರಾವ್ ಇವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕರು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ. ಪಿ. ವೆಂಕಟರಾಯ ಭಂಡಾರಿಯವರು ವಹಿಸಿದ್ದರು. ಕು. ಪ್ರಜ್ಞಾ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು,
ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಹಾಗೂ ಸರ್ವರನ್ನೂ ಸ್ವಾಗತಿಸಿದರು. ಉಡುಪಿಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನಃಶಾಸ್ತ್ರಜ್ಞರಾದ ಶ್ರೀ ನಾಗರಾಜ ಮೂರ್ತಿಯವರು ವಂದಿಸಿದರು. ಆಪ್ತ ಸಮಾಲೋಚಕರಾಗಿರುವ ಶ್ರೀಮತಿ ಪ್ರೀತಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನವಜೀವನ ಲೇ ಕೌನ್ಸೆಲರ್ ತರಬೇತಿ ಕಾರ್ಯಗಾರದ ಪ್ರಥಮ ತರಗತಿಗಳು ನಡೆದುವು. 20 ಮಂದಿ ಕಲಿಕಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆಯಲಿದ್ದಾರೆ.