ದಿನಾಂಕ 2/10/2023 ಬೆಳಿಗ್ಗೆ 10 ಗಂಟೆಗೆ ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್ ಗಳ ತರಬೇತಿ ಕಾರ್ಯಗಾರ ಕೋರ್ಸಿನ ಮೊದಲ ಬ್ಯಾಚಿನ ತರಗತಿಗಳ ಉದ್ಘಾಟನೆಯನ್ನು ಡಾ. ಸಿ. ಆರ್. ಚಂದ್ರಶೇಖರ್, ನಿವೃತ್ತ ಹಿರಿಯ ಪ್ರಾಧ್ಯಾಪಕರು, ಮನೋವೈದ್ಯಕೀಯ ವಿಭಾಗ, ನಿಮಾನ್ಸ್ ಬೆಂಗಳೂರು ಮತ್ತು ಸ್ಥಾಪಕರು, ಸಮಾಧಾನ ಆಪ್ತ ಸಮಾಲೋಚನೆ ಕೇಂದ್ರ, ಬೆಂಗಳೂರು ಇವರು ಮಾಡಿದರು. ಲೇ ಕೌನ್ಸಿಲರ್ ತರಬೇತಿ ಕೋರ್ಸಿನ ಕ್ಯಾಲೆಂಡರ್ ನ ಅನಾವರಣವನ್ನು ಡಾ. ಶ್ರೀನಿವಾಸ ಭಟ್. ಯು, ಪ್ರಾಧ್ಯಾಪಕರು ಮನೋವೈದ್ಯಕೀಯ ವಿಭಾಗ, ಕ್ಷೇಮ ಮಂಗಳೂರು ಇವರು ಮಾಡಿದರು. ವೇದಿಕೆಯಲ್ಲಿ ಒನ್ ಗುಡ್ ಸ್ಟೆಪ್ ನ ಸ್ಥಾಪಕರಾದ ಶ್ರೀಮತಿ ಅಮಿತಾ ಪೈ ಮತ್ತು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರು ಆಗಿರುವ ಡಾ ವಿರೂಪಾಕ್ಷ ದೇವರಮನೆ, ಡಾ ಮಾನಸ್. ಇ. ಆರ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಪಿ. ವಿ. ಭಂಡಾರಿಯವರು ವಹಿಸಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿಣಿ ಆಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಪೇಷೆಂಟ್ ಕೇರ್ ಎಕ್ಸಿಕ್ಯೂಟಿವ್ ಆಗಿರುವ ಶ್ರೀ ರಂಗನಾಥ ಬಿ ರಾವ್ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಆಸ್ಪತ್ರೆಯ ಅಪ್ತಸಮಲೋಚಕರಾದ ಶ್ರೀಮತಿ ಪದ್ಮ ರಾಘವೇಂದ್ರ ನಿರೂಪಿಸಿ, ಮನಶಾಸ್ತ್ರಜ್ಞರಾದ ಶ್ರೀ ನಾಗರಾಜ್ ಮೂರ್ತಿ ವಂದಿಸಿದರು. ಈ ತರಬೇತಿ ಕಾರ್ಯಗಾರ ಕೋರ್ಸಿನಲ್ಲಿ 27ಮಂದಿ ಅಭ್ಯರ್ಥಿಗಳು ಭಾಗವಹಿಸಿರುತ್ತಾರೆ.