Select Page

Date: February 28, 2023

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವೈಜ್ಞಾನಿಕ ಮನೋಭಾವ – ಸಂವಾದ ಮತ್ತು ಪ್ರದರ್ಶನ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಭಾರತೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟ, ಇವರ ಜಂಟಿ ಆಶ್ರಯದಲ್ಲಿ ವಿಚಾರವಾದಿ ಡಾ. ನರೇಂದ್ರ ನಾಯಕ್ ಅವರಿಂದ ತಾರೀಖು 28-02-2023 ರಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು.

ಖ್ಯಾತ ಸಾಮಾಜಿಕ ಹೋರಾಟಗಾರರಾದ ಶ್ರೀ ರವೀಂದ್ರನಾಥ್ ಶಾನುಭಾಗ್, ರಥಬೀದಿ ಗೆಳೆಯರು (ರಿ) ಸಂಸ್ಥೆಯ ಶ್ರೀ ಮುರಳೀಧರ ಉಪಾಧ್ಯ ಹಿರಿಯಡ್ಕ ಹಾಗೂ ಶ್ರೀಮತಿ ಪ್ರಜ್ಞಾರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ. ವಿ. ಭಂಡಾರಿಯವರು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ವಿಚಾರವಾದಿ ಡಾ. ನರೇಂದ್ರ ನಾಯಕರು ಭಾಗವಹಿಸಿದರು. ಪ್ರಜ್ಞಾ ರವರು ಲಿಂಗ ಸಮಾನತೆಯ ಬಗ್ಗೆ ಮಾತಾಡಿದರೆ, ಡಾ. ನರೇಂದ್ರ ನಾಯಕರು ಪವಾಡಗಳ ಬಗ್ಗೆ, ದೇವ ಮಾನವರ ಕಾರ್ಯ ವಿಧಾನ ಬಗ್ಗೆ ಮಾತಾಡಿದರು. ಮಾನಸಿಕ ಶಸ್ತ್ರಚಿಕಿತ್ಸೆ ಎಂಬ ಆಪರೇಷನ್ ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಹಾಗೂ ವೈಜ್ಞಾನಿಕ ಮನೋಭಾವನೆಯ ಬಗ್ಗೆ, ಮೂಢಾಚರಣೆಗಳ ಬಗ್ಗೆ ಪ್ರಾತ್ಯಕ್ಷತೆಯ ಮೂಲಕ ವಿವರಿಸಿದರು. ಡಾ. . ಪಿ. ವಿ. ಭಂಡಾರಿಯವರು ಮಾನಸಿಕ ಕಾಯಿಲೆಗಳು ಮತ್ತು ಮೂಡ ನಂಬಿಕೆಗಳು ಎಂಬ ವಿಷಯದ ಕುರಿತು ಮಾತಾಡಿದರು.