ದಿನಾಂಕ 7-4-2023 ರ ಶುಕ್ರವಾರದಂದು ಮೂತ್ರಪಿಂಡ ಚಿಕಿತ್ಸಾ ಹೊರರೋಗಿ ವಿಭಾಗದ ಉದ್ಘಾಟನಾ ಸಮಾರಂಭವು ಡಾ. ಎ. ವಿ ಬಾಳಿಗ ಸಮೂಹ ಸಂಸ್ಥೆಗಳ ಆವರಣದಲ್ಲಿ ನಡೆಯಿತು. (ಅಣ್ಣಪ್ಪನಗರ, ಸಾಲಿಕೇರಿ, ಬ್ರಹ್ಮಾವರ) ಇದರ ಉದ್ಘಾಟನೆಯನ್ನು ರೋಟರಿಯನ್ ಶ್ರೀ ದಿನೇಶ್ ಕುಮಾರ್ ನಾಯರಿ, ಅಧ್ಯಕ್ಷರು ರೋಟರಿ ಬ್ರಹ್ಮಾವರ ಇವರು ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ನಿರ್ದೇಶಕರು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಡಾ. ಮೇಘ ಪೈ, (Consultant Nephrologist & Transplant Physician) ಇವರು ಉಪಸ್ಥಿತರಿದ್ದರು. ಶ್ರೀ ಗಣೇಶ್ ಕೋಟ್ಯಾನ್ ಕಾರ್ಯಕ್ರಮವನ್ನು ಸ್ವಾಗತಿಸಿ, ಅಭಯ ಪುನರ್ ವಸತಿ ಕೇಂದ್ರದ ಪ್ರಬಂಧಕರಾದ ಶ್ರೀ ನಾಗರಾಜ್ ಟಿ. ಪಿ ನಿರೂಪಿಸಿ ವಂದಿಸಿದರು.
ಪ್ರತಿ ಶುಕ್ರವಾರ ಮಧ್ಯಾಹ್ನ 2:30 ರಿಂದ 4:00 ರ ವರೆಗೆ ಸಂದರ್ಶನಕ್ಕೆ ಡಾ. ಮೇಘ ಪೈ ಲಭ್ಯರಿರುತ್ತಾರೆ.