Select Page

Date: June 8, 2024

ತಾರೀಖು 08ನೇ ಜೂನ್ 2024 ರ ಶನಿವಾರದಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಭಾರತೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ವೈಜ್ಞಾನಿಕ ಮನೋಭಾವ ಸಂವಾದ ಮತ್ತು ಪ್ರದರ್ಶನ ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮವನ್ನು 74 ವರ್ಷದ ಪ್ರೊಫೆಸರ್ ನರೇಂದ್ರ ನಾಯಕ್ ಅವರು ಪ್ರಾತ್ಯಕ್ಷಿಕೆ ಹಾಗೂ ವೀಡಿಯೋ ಪ್ರದರ್ಶನಗಳ ಮೂಲಕ ಬೆಳಿಗ್ಗೆ 9:00 ರಿಂದ ಸಾಯಂಕಾಲ 4:00 ರ ವರೆಗೆ ನಡೆಸಿಕೊಟ್ಟರು.
ಡಾ. ಎ.‌ ವಿ‌. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ.‌ ವೆಂಕಟರಾಯ ಭಂಡಾರಿಯವರು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮೌಢ್ಯಗಳು ಹೇಗೆ ಅಡ್ಡಿಯುಂಟುಮಾಡುತ್ತದೆ ಹಾಗೂ ಉಲ್ಬಣಗೊಳ್ಳುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಕಿರು ಪರಿಚಯವನ್ನು ಡಾ. ಎ.‌ ವಿ‌. ಬಾಳಿಗಾ ಸ್ಮಾರಕ ಆಸ್ಪತ್ರೆಯ ಪೇಟೆಂಟ್ ಕೇರ್ ಎಕ್ಸಿಕ್ಯೂಟಿವ್ ಆಗಿರುವ ಶ್ರೀ ರಂಗನಾಥ ರಾವ್ ಅವರು ಮಾಡಿ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರೆ, ಡಾ. ಎ.‌ ವಿ‌. ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿಯವರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯನ್ನು ಮಾಡಿದರು.
ಈ ಕಾರ್ಯಗಾರದಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅರಿವಿನ ನಿಸ್ತಾರ ಮಾಡಿಕೊಂಡರು.