Select Page

Date: February 21, 2023

ದಿನಾಂಕ 21.02.2023 ಮಂಗಳವಾರದಂದು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ; ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ; ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ; ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇವರ ಜಂಟಿ ಆಶ್ರಯದಲ್ಲಿ “ವೈದ್ಯರಿಗೆ ಒತ್ತಡ ನಿರ್ವಹಣೆ” ಎಂಬ ವಿಷಯದ ಕುರಿತು ಒಂದು ದಿನದ ಮಾಹಿತಿ ಕಾರ್ಯಗಾರವು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು ಹಾರಾಡಿ, ಬ್ರಹ್ಮಾವರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ, ಡಾ. ನಾಗಭೂಷಣ ಉಡುಪರು ಮಾಡಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಲತಾ ನಾಯಕ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿಯ ಮನೋವೈದ್ಯರಾದ ಡಾ. ಮನು ಆನಂದ್ ಮತ್ತು ಭಾರತೀಯ ವೈದ್ಯಕೀಯ ಸಂಘ ಕಾರ್ಕಳದ ಅಧ್ಯಕ್ಷರಾದ ಡಾ ಪ್ರಕಾಶ್ ಇವರು ಉಪಸಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು ಉಡುಪಿಯ ವೈದ್ಯಕೀಯ ನಿರ್ದೇಶಕರು, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿಯ ಅಧ್ಯಕ್ಷರು, ಮನೋವೈದ್ಯರಾದ ಡಾ. ಪಿ. ವಿ. ಭಂಡಾರಿಯವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ವಾರ್ಷಿಕ ಕ್ಯಾಲೆಂಡರನ್ನು ಉಡುಪಿಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗಭೂಷಣ ಉಡುಪರು ಬಿಡುಗಡೆಗೊಳಿಸಿದರು.
ಉಡುಪಿಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಲತಾ ನಾಯಕ್ ಇವರು ಸ್ವಾಗತಿಸಿದರು. ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಆಡಳಿತಾಧಿಕಾರಿಣಿ ಶ್ರೀಮತಿ ಸೌಜನ್ಯ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು. ಅಭಯ ಪುನರ್ವಸತಿ ಕೇಂದ್ರ ಹಾರಾಡಿಯ ನಿವಾಸಿಗಳು ಪ್ರಾರ್ಥಿಸಿದರು, ಅಭಯ ಪುನರ್ವಸತಿ ಕೇಂದ್ರ ಹಾರಾಡಿಯ ಪ್ರಭಂಧಕರಾದ ಶ್ರೀಯುತ ನಾಗರಾಜ್ ಟಿ. ಪಿ ಕಾರ್ಯಕ್ರಮ ನಿರೂಪಿಸಿದರು.