Select Page

Date: October 3, 2023

ದಿನಾಂಕ 03.10.2023 ರ ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಡಾ.‌ ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಇದರ ಜಂಟಿ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಮತ್ತು ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಕೆನರಾ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರ ವಿದ್ಯಾರ್ಥಿಗಳಿಗೆ “ಮಾನಸಿಕ ರೋಗಿಗಳ ಆರೈಕೆಯಲ್ಲಿ ಮನೋಆರೋಗ್ಯ ವೃತ್ತಿಪರರ ಪಾತ್ರ” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರವು ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಮನೋವೈದ್ಯರು, ಖ್ಯಾತ ಲೇಖಕರೂ ಆದ ಡಾ. ಸಿ. ಆರ್. ಚಂದ್ರಶೇಖರ್, ನಿವೃತ್ತ ಹಿರಿಯ ಪ್ರಾಧ್ಯಾಪಕರು, ಮನೋವೈದ್ಯಕೀಯ ವಿಭಾಗ ನಿಮ್ಹಾನ್ಸ್ ಹಾಗೂ ಸ್ಥಾಪಕರು, ಸಮಾಧಾನ ಆಪ್ತ ಸಮಾಲೋಚನಾ ಕೇಂದ್ರ, ಬೆಂಗಳೂರು ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ಮನೋವೈದ್ಯರು ಹಾಗೂ ವೈದ್ಯಕೀಯ ನಿರ್ದೇಶಕರು, ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ, ಇವರು ವಹಿಸಿದ್ದರು. ವೇದಿಕೆಯಲ್ಲಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಇಲ್ಲಿನ ಮನೋವೈದ್ಯರುಗಳಾದ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ ಹಾಗೂ ಡಾ ಮಾನಸ್. ಇ. ಆರ್ ಉಪಸಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ ಅವರು ಪ್ರಾರ್ಥಿಸಿದರು. ಶ್ರೀಮತಿ ಪ್ರಮೀಳಾ ಡಿಸೋಜ ಅವರು ಸ್ವಾಗತಿಸಿದರು. ಶ್ರೀಮತಿ ಶ್ವೇತಾ ಹಾಗೂ ಶ್ರೀಮತಿ ಎಲಿಜಬೆತ್ ಪಿ. ಕೆ ಅವರು ನಿರೂಪಿಸಿದರು. ಶ್ರೀಮತಿ ದೀಪಶ್ರೀ ಅವರು ವಂದಿಸಿದರು . ಉದ್ಘಾಟನಾ ಸಮಾರಂಭದ ನಂತರ “ಮಾನಸಿಕ ರೋಗಿಗಳ ಆರೈಕೆಯಲ್ಲಿ ಮನೋ ಆರೋಗ್ಯ ವೃತ್ತಿಪರರ ಪಾತ್ರ” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರವು ನಡೆಯಿತು. ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಹಾಗೂ ಮನೋವಿಜ್ಞಾನ ವಿದ್ಯಾರ್ಥಿಗಳು ಮತ್ತು ಕೆನರಾ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರದ ನರ್ಸಿಂಗ್ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದರು.