Select Page

Date: May 31, 2023

ದಿನಾಂಕ 31.05.2023 ಬುಧವಾರ ಬೆಳಿಗ್ಗೆ 9:30 ಗಂಟೆಗೆ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಡಾ. ಎ . ವಿ . ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಭಾರತೀಯ ವೈದ್ಯಕೀಯಸಂಘ ಉಡುಪಿ- ಕರಾವಳಿ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಅರ್ಧ ದಿನದ ಮಾಹಿತಿ ಕಾರ್ಯಗಾರವನ್ನು ಡಾ ಕೇಶವ್ ನಾಯಕ್, ಕಾರ್ಯದರ್ಶಿಗಳು, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಮೂಳೆರೋಗ ತಜ್ಞರು ಹೈಟೆಕ್ ಮೆಡಿಕೇರ್ ಆಸ್ಪತ್ರೆ ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವರ್ಷದ ಧ್ಯೇಯ ವಾಕ್ಯ “We need food ,Not tobacco”. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ವೈದ್ಯಕೀಯ ನಿರ್ದೇಶಕರು, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇವರು ವಹಿಸಿದ್ದರು .
ಈ ವೇದಿಕೆಯಲ್ಲಿ ಡಾ. ಮಾನಸ್. ಇ. ಆರ್, ಮನೋವೈದ್ಯರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಮತ್ತು ಡಾ. ಸುನಿಲ್ ಕುಮಾರ್. ಜಿ ವೈದ್ಯಾಧಿಕಾರಿಗಳು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ ಶ್ರೀಯುತ ನಾಗರಾಜ್ ಮೂರ್ತಿ,ಮನಶಾಸ್ತ್ರಜ್ಞರು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಣಿಯಗಿರುವ ಶ್ರೀಮತಿ ಸೌಜನ್ಯ ಶೆಟ್ಟಿಯವರು ಉಪಸಿತರಿದ್ದರು.
ಈ ಕಾರ್ಯಕ್ರಮದ ಮೊದಲಿಗೆ ಶ್ರೀಮತಿ ಪದ್ಮಾ ರಾಘವೇಂದ್ರ ಅವರು ಪ್ರಾರ್ಥಿಸಿದರು. ಶ್ರೀಮತಿ ಸೌಜನ್ಯ ಶೆಟ್ಟಿ ಅವರು ಸ್ವಾಗತಿಸಿದರು. ಕುಮಾರಿ ಚಂದ್ರಿಕಾ ಅವರು ನಿರೂಪಿಸಿದರು . ಹಾಗೂ ಶ್ರೀ ಅರ್ವಿನ್ ಅವರು ವಂದಿಸಿದರು.
ಉದ್ಘಾಟನಾ ಸಮಾರಂಭದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಿ. ವಿ. ಭಂಡಾರಿ, ಡಾ.‌ ಸುನಿಲ್, ಡಾ. ಮಾನಸ್. ಇ. ಆರ್ ಮತ್ತು ಶ್ರೀಯುತ ನಾಗರಾಜ್ ಮೂರ್ತಿ ಇವರಿಂದ ವಿದ್ಯಾರತ್ನ ಸ್ಕೂಲ್ & ನರ್ಸಿಂಗ್ ಕಾಲೇಜ್ ಉಡುಪಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಡಿಯೂರು, ಹಾಗೂ ಎಂ. ವಿ. ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು