Select Page

Date: September 11, 2023

ದಿನಾಂಕ 11.09.2023 ಸೋಮವಾರ ಬೆಳಿಗ್ಗೆ 9:30 ಗಂಟೆಗೆ ವಿಶ್ವ ಆತ್ಮಹತ್ಯೆ ತಡೆರಹಿತ ದಿನದ ಅಂಗವಾಗಿ ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ,ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ , ಭಾರತೀಯ ವೈದ್ಯಕೀಯಸಂಘ ಉಡುಪಿ- ಕರಾವಳಿ ,ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ನಡೆಯಿತು. ಪ್ರೊಫೆಸರ್ ಕೆ ಎಸ್ ಅಡಿಗ ನಿವೃತ್ತ ಪ್ರಾಂಶುಪಾಲರು ಯುಪಿಎಂಸಿ ಉಡುಪಿ , ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವರ್ಷದ ಧ್ಯೇಯ ವಾಕ್ಯ ” ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು “
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ದೀಪಕ್ ಮಲ್ಯ , ಮನೋವೈದ್ಯರು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಶ್ರೀಯುತ ನಾಗರಾಜ್ ಮೂರ್ತಿ,ಮನಶಾಸ್ತ್ರಜ್ಞರು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ ಧನ್ವಂತರಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ, ಪ್ರಾಂಶುಪಾಲರು ಶ್ರೀಯುತ ಶಿವಪ್ರಸಾದ್ ಪ್ರಭು ಹಾಗೂ ಆಡಳಿತಾಧಿಕಾರಿಣಿಯಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸಿತರಿದ್ದರು. ಈ ಕಾರ್ಯಕ್ರಮಕ್ಕೆ ಡಾ ರಾಜಶ್ರೀ ಹಾಗೂ ಶ್ರೀಮತಿ ಶ್ವೇತಾ ನಾಯಕ್ ಅವರು ಪ್ರಾರ್ಥಿಸಿದರು. ಶ್ರೀಮತಿ ಸೌಜನ್ಯ ಶೆಟ್ಟಿ ಅವರು ಸ್ವಾಗತಿಸಿದರು. ಶ್ರೀಮತಿ ದೀಪಶ್ರೀ ಅವರು ನಿರೂಪಿಸಿದರು . ಹಾಗೂ ಶ್ರೀಮತಿ ಪದ್ಮ ರಾಘವೇಂದ್ರ ಅವರು ವಂದಿಸಿದರು . ಉದ್ಘಾಟನಾ ಸಮಾರಂಭದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ನಾಗರಾಜ್ ಮೂರ್ತಿ ಇವರು ಆತ್ಮಹತ್ಯೆಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಡಾ ದೀಪಕ್ ಮಲ್ಯ ಇವರು ಆತ್ಮಹತ್ಯೆ ಯ ಎಚ್ಚರಿಕೆಯ ಚಿನ್ಹೆಗಳನ್ನು ಗುರುತಿಸುವ ಬಗ್ಗೆ ಮಾತನಾಡಿದರು ಹಾಗೂ ಡಾ ಶಾಲಿನಿ ಶರ್ಮ ಇವರು ಆತ್ಮಹತ್ಯ ಅಪಾಯದಲ್ಲಿರುವ ವ್ಯಕ್ತಿಯೊಂದಿಗೆ ಹೇಗೆ ಸಂವಹನೆ ಮತ್ತು ಅದನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುದರ ಕುರಿತಾಗಿ ಮಾತನಾಡಿದರು ಹಾಗೂ ಡಾ ವಿರೂಪಾಕ್ಷ ದೇವರಮನೆ ಇವರು ಆತ್ಮಹತ್ಯೆ ಅಪಾಯದಲ್ಲಿರುವವರಿಗೆ ಮಾನಸಿಕವಾಗಿ ಬೆಂಬಲ ಮತ್ತು ಅಗತ್ಯ ಹಾಗೂ ಲಭ್ಯವಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು , ಧನ್ವಂತರಿ ಸ್ಕೂಲ್ & ನರ್ಸಿಂಗ್ ಕಾಲೇಜ್ ಉಡುಪಿ, ಕಾಲೇಜು ಹಾಗೂ ಕಲಬುರ್ಗಿ ನರ್ಸಿಂಗ್ ಕಾಲೇಜು ಹಾಗೂ ಮನಶಾಸ್ತ್ರ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದರು .